ಡೆ ಲ ಬೆಷ್, ಹೆನ್ರಿ ತಾಮಸ್
	1796-1855. ಇಂಗ್ಲೆಂಡಿನ ಭೂವಿe್ಞÁನಿ. ಜನಿಸಿದ್ದು ಲಂಡನ್ನಿನಲ್ಲಿ (10 ಜನವರಿ 1796). ತಾಮಸ್ ಬೀಕ್ ಇವನ ತಂದೆ; ಒಬ್ಬ ಸೈನ್ಯಾಧಿಕಾರಿ. ಡೆ ಲ ಬೆಷ್‍ನ ಪ್ರಾಥಮಿಕ ವಿದ್ಯಾಭ್ಯಾಸ ಕೆಲಕಾಲ ಡೆವನ್‍ಷೈರಿನ ಅಟರಿ ಸೇಂಟ್ ಮೇರಿ ಶಾಲೆಯಲ್ಲಿ ನಡೆಯಿತು. ಅನಂತರ ತನ್ನ ತಾಯಿಯೊಡಗೂಡಿ ಡಾರಸೆಟ್‍ಷೈರಿಗೆ ಪ್ರಯಾಣಮಾಡಿದ. ಜಾರ್‍ಮಾತ್ ಎಂಬಲ್ಲಿ ಕೆಲಕಾಲ ಆ ಬಳಿಕ ಲೈಮ್ ಗಿರಿಸ್ ಎಂಬಲ್ಲಿ ಇವನ ವಾಸವಿತ್ತು. ಸಮುದ್ರತೀರದ ಈ ಸ್ಥಳಗಳಲ್ಲಿನ ಚಾಚುಬಂಡೆಗಳಲ್ಲಿ ಜುರಾಸಿಕ್ ಯುಗದ ಶಿಲೆಗಳು ಚೆನ್ನಾಗಿ ಕಾಣಬರುತ್ತಿದ್ದು ಇದರತ್ತ ಡೆಲ ಬೆಷ್‍ನ ಗಮನ ಹರಿಯಿತು. ಈ ವಿಶೇಷಾಸಕ್ತಿಯೇ ತನ್ನ ವೃತ್ತಿಯನ್ನು ರೂಪಿಸಿಕೊಳ್ಳುವುದಕ್ಕೆ ಇವನಿಗೆ ನೆರವಾಯಿತು. ಈತನನ್ನು ಮಾರ್ಲೋದಲ್ಲಿನ ರಾಯಲ್ ಮಿಲಿಟರಿ ಕಾಲೇಜಿಗೆ ಕಳುಹಿಸಿದರು (1810). ಆದರೆ ನೆಪೋಲಿಯನ್ ಯುದ್ಧಗಳು ಮುಗಿದು ಮುಂದಿನ ವರ್ಷಗಳಲ್ಲಿ ಈತನಿಗೆ ಸೈನ್ಯದಲ್ಲಿ ವಿಶೇಷ ಭವಿಷ್ಯ ಇಲ್ಲದ್ದರಿಂದ ಆ ಜೀವನವನ್ನು ತೊರೆದು ನಾಗರಿಕ ಜೀವನವನ್ನು ಪ್ರಾರಂಭಿಸಿದ. ಈತನನ್ನು 1817ರಲ್ಲಿ ಲಂಡನ್ನಿನ ಜಿಯೊಲಾಜಿಕಲ್ ಸರ್ವೆಯ ಸದಸ್ಯನನ್ನಾಗಿ ಆರಿಸಲಾಯಿತು. ವೇಮ್‍ತ್ ಮತ್ತು ಟಾಕ್ರ್ವೇ ನಡುವಣ ಭೂವೈe್ಞÁನಿಕ ವೀಕ್ಷಣೆಗಳನ್ನು ಕುರಿತಂತೆ 1818ರ ಈತನ ಟಿಪ್ಪಣಿ ಪುಸ್ತಕದಲ್ಲಿ ಕಂಡುಬಂದ ದಾಖಲಾತಿಗಳು ಈತ ಕ್ಷೇತ್ರಭೂವಿe್ಞÁನದಲ್ಲಿ ಆ ಹೊತ್ತಿಗಾಗಲೇ ಆಸಕ್ತಿವಹಿಸಿದ್ದುದನ್ನು ವ್ಯಕ್ತಪಡಿಸುತ್ತವೆ. ರಾಯಲ್ ಸೊಸೈಟಿಯ ಸದಸ್ಯತ್ವ ಈತನಿಗೆ ಲಭಿಸಿದ್ದು 1819ರಲ್ಲಿ. ಇದೇ ವರ್ಷ ಇವನು ಫ್ರಾನ್ಸ್, ಸ್ವಿಟಜûರ್‍ಲೆಂಡ್ ಮತ್ತು ಇಟಲಿಗಳಿಗೆ ಪ್ರವಾಸ ಹೊರಟ. ಮರಳುವ ಹಾದಿಯಲ್ಲಿ ಜರ್ಮನಿ ಮತ್ತು ನೆದರ್‍ಲೆಂಡುಗಳನ್ನೂ ಸಂದರ್ಶಿಸಿದ. ವಿದೇಶಯಾತ್ರೆಯ ಈ ದೀರ್ಘ ಅವಧಿಯಲ್ಲಿ ಈತ ಬಹಳಷ್ಟು ಭೂವೈe್ಞÁನಿಕ ವೀಕ್ಷಣೆಗಳನ್ನು ಮಾಡಿ ಕೆಲಕಾಲದ ಅನಂತರ ಅವನ್ನು ಪ್ರಕಟಿಸಿದ. ಜಿನೀವ ಸರೋವರದ ಆಳ ಮತ್ತು ಉಷ್ಣತೆಗಳನ್ನು ಕುರಿತಂತೆ ಈತನ ಮೊತ್ತ ಮೊದಲ ವೈe್ಞÁನಿಕ ಪ್ರೌಢಬರೆಹ ಜಿನೀವದಲ್ಲಿ ಪ್ರಕಟವಾಯಿತು (1819). 

	ಈತ ಜಮೇಕಕ್ಕೆ ಹೋಗಿ ಅಲ್ಲಿದ್ದ ತನ್ನ ಪಿತ್ರಾರ್ಜಿತ ಭೂಮಿಯನ್ನು ನೋಡಿಕೊಳ್ಳುತ್ತ 1824ರ ಪೂರ್ತ ಅಲ್ಲೇ ಇದ್ದು ಬಿಟ್ಟ. ಅಲ್ಲಿದ್ದಾಗ ಜಮೇಕ ದ್ವೀಪದ ಭೂವಿe್ಞÁನವನ್ನು ಕುರಿತ ಅಧ್ಯಯನ ನಡೆಸಿದ. ಅಲ್ಲಿಂದ ಮರಳಿ ಬಂದ ಬಳಿಕ ತಾನು ನಡೆಸಿದ ಅಧ್ಯಯನಗಳ ವರದಿಯನ್ನು ಜಿಯೊಲಾಜಿಕಲ್ ಸೊಸೈಟಿಗೆ ಅರುಹಿದ. ಜಮೇಕದ ಭೂವಿe್ಞÁನವನ್ನು ಕುರಿತಂತೆ ಪ್ರಕಟವಾದ ವಿವರಣೆಯಲ್ಲಿ ಆ ದ್ವೀಪದ ಪೂರ್ವಾರ್ಧ ಭಾಗದ ವರ್ಣಮಯವಾದ ಭೂವೈe್ಞÁನಿಕ ಭೂಪಟಗಳು ಕಂಡುಬರುತ್ತವೆ. 1829ರಲ್ಲಿ ಈತ ಮತ್ತೊಮ್ಮೆ ಯೂರೋಪಿನ ಪ್ರವಾಸ ಕೈಗೊಂಡು ತಾನು ಮಾಡಿದ ವೀಕ್ಷಣೆಗಳನ್ನು ಮುಂದೆ ಪ್ರಕಟಿಸಿದ. ಸೆಕ್ಷನ್ಸ್ ಅಂಡ್ ವ್ಯೂಸ್ ಇಲಸ್ಟ್ರೇಟಿವ್ ಜಿಯೊಲಾಜಿಕಲ್ ಫಿನೋಮಿನ (1830) ಮತ್ತು ಜಿಯೊಲಾಜಿಕಲ್ ಮ್ಯಾನ್ಯುಯಲ್ (1831) ಎಂಬವು ಈತನ ಮಹತ್ತ್ವದ ಬರೆಹಗಳು. ಇವುಗಳಲ್ಲದೆ ಟ್ರಾನ್ಯಾಕ್ಷನ್ಸ್ ಆಫ್ ದಿ ಜಿಯೊಲಾಜಿಕಲ್ ಸೊಸೈಟಿ ಆಫ್ ಲಂಡನ್ ಮತ್ತಿತರ ನಿಯತಕಾಲಿಕೆಗಳಿಗೆ ಬ್ರಿಟನ್ ಮತ್ತು ವಿದೇಶ ಭೂವಿe್ಞÁನ ವಿಷಯಗಳನ್ನು ಕುರಿತಂತೆ ಲೇಖನಗಳನ್ನೂ ಬರೆದ. ಯಾವುದೇ ಒಂದು ಬಗೆಯ ಇಲ್ಲವೆ ಒಂದು ಯುಗಕ್ಕೆ ಸಂಬಂಧಿಸಿದ ಶಿಲೆಯ ಅಧ್ಯಯನಕ್ಕೆ ಡೆಲ ಬೆಷ್ ತನ್ನ ಕ್ಷೇತ್ರಕಾರ್ಯವನ್ನು ಸೀಮಿತಗೊಳಿಸಿರಲಿಲ್ಲ. ಭೂವಿe್ಞÁನಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಓದುವುದರಿಂದ ಭೂವಿe್ಞÁನದ ಬಗ್ಗೆ ಅಪಾರ e್ಞÁನವನ್ನು ಸಂಪಾದಿಸಿದ್ದ. ಇದರ ಸಲುವಾಗಿ ಅನೇಕ ಸಚಿತ್ರ ಲೇಖನಗಳನ್ನು ಸುಲಭವಾಗಿಯೂ ಸ್ಫುಟವಾಗಿಯೂ ನಿರೂಪಿಸಲು ಇವನಿಗೆ ಸಾಧ್ಯವಾಯಿತು. ಶಿಲೆಗಳ ಉತ್ಪತ್ತಿ, ರಚನೆಗಳನ್ನು ವಿವರಿಸುವಲ್ಲಿ ತನ್ನ ವೀಕ್ಷಣೆಗಳನ್ನು ಜಿಯೊಲಾಜಿಕಲ್ ಸೊಸೈಟಿಯ ಮೂಲಧ್ಯೇಯಗಳಿಗೆ ಅನುಸಾರವಾಗಿಯೇ ಪ್ರಕಟಿಸುತ್ತಿದ್ದ. ರಿಸರ್ಚಸ್ ಇನ್ ಥಿಯೊರೆಟಿಕಲ್ ಜಿಯೋಲಜಿ (1834) ಎಂಬುದರಲ್ಲಿನ ಇವನ ಬರೆಹಗಳು ಇದನ್ನು ಸ್ಪಷ್ಟಪಡಿಸುತ್ತವೆ. ಸಾಕಷ್ಟು ನಿಜ ಆಧಾರಗಳು ತತ್ತ್ವಗಳನ್ನು ಸ್ಥಿರಪಡಿಸುವ ವರೆಗೆ ಆ ತತ್ತ್ವಗಳನ್ನು ತಾತ್ಕಾಲಿಕ ಸಂಗತಿಗಳಾಗಿ ಪರಿಗಣಿಸಬೇಕು ಎಂಬ ಅಭಿಪ್ರಾಯವನ್ನು ಈತ ತಳೆದಿದ್ದ. ಈ ಪುಸ್ತಕದಲ್ಲಿ ನಿರೂಪಿತವಾಗಿರುವ ತಾತ್ತ್ವಿಕ ಭೂವಿe್ಞÁನದ ಅಂಶಗಳ ಚರ್ಚೆಗೆ ತಾನು ಗಳಿಸಿಕೊಂಡ ಖನಿಜಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಗಳ ನೆರವನ್ನು ತೆಗೆದುಕೊಂಡ. ಅಲ್ಲಿನ ಅಭಿಪ್ರಾಯಗಳು ತತ್ತ್ವಾತ್ಮಕವಾಗಿರುವ ಬದಲು ಸೂಚನಾತ್ಮಕವಾಗಿದ್ದವು.

	ಇನ್ನಿತರ ಭೂವಿe್ಞÁನಿಗಳಾದ ಚಾರಲ್ಸ್ ಲಯೆಲ್, ರೋಡ್ರಿಕ್ ಮೂರ್‍ಚಿಸನ್ ಮುಂತಾದ ಸಮಕಾಲೀನರ ಸಹವಾಸದ ಫಲವಾಗಿ ಅವರು ನಡೆಸಿರುವ ಸಂಶೋಧನೆಗಳನ್ನೂ ತಿಳಿದುಕೊಳ್ಳಲು ಈತನಿಗೆ ಅವಕಾಶವೊದಗಿತು. ಆದರೆ ಇವನಿಗೆ ಒದಗಿದ ಸಂದರ್ಭಗಳು ಸಂಶೋಧನೆಯ ಹಾದಿಯಲ್ಲಿ ಈತ ಮುಂದುವರಿಯಲು ಅವಕಾಶವೀಯಲಿಲ್ಲ. ಇದರಿಂದಾಗಿ ಈತ ತನ್ನ ಜೀವನದ ಉಳಿದ ಭಾಗವನ್ನು ವೃತ್ತಿನಿರತ ಭೂವಿe್ಞÁನಿಯಾಗಿಯೇ ಕಳೆಯಬೇಕಾಯಿತು. ಗ್ರೇಟ್ ಬ್ರಿಟನ್ನಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಭೂವೈe್ಞÁನಿಕ ಮೋಜಣಿಯ ರಚನೆ ಹಾಗೂ ಅಭಿವೃದ್ಧಿ ಕೆಲಸದಲ್ಲಿ ಈತ ಸಿಕ್ಕಿಕೊಂಡದ್ದೂ ಇದಕ್ಕೆ ಒಂದು ಕಾರಣವಾಗಿರಬಹುದು. ಡೆವನ್‍ಷೈರಿನ ಭೂವೈe್ಞÁನಿಕ ಮೋಜಣಿಯನ್ನು ನಡೆಸಬೇಕೆಂದೂ ಈತ ಸಲಹೆ ಮಾಡಿದ. ಮೊದಮೊದಲಿಗೆ ಇದಕ್ಕೆ ತಗಲುವ ಹೆಚ್ಚಿನ ಹಣದ ಮುಗ್ಗಟ್ಟಿಗೋಸ್ಕರ ಈ ಕೆಲಸ ಸಾಧ್ಯವಾಗದಿದ್ದರೂ ಕ್ರಮೇಣ ಗ್ರೇಟ್ ಬ್ರಿಟನ್ನಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿ, 1835ರ ಹೊತ್ತಿಗೆ ಡೆ ಲ ಬೆಷ್ ಈ ಕೆಲಸವನ್ನು ಪೂರೈಸಿದ. ಇದೇ ಬಗೆಯ ಮೋಜಣಿ ಕೆಲಸವನ್ನು ಇಡೀ ನಾಡಿಗೆ ಅನ್ವಯ ಮಾಡಬೇಕೆಂದು ಈತ ಸಲಹೆಮಾಡಿದ. ಕಾಲಕ್ರಮೇಣ ಜಿಯೊಲಾಜಿಕಲ್ ಸರ್ವೆ ಆಫ್ ಗ್ರೇಟ್ ಬ್ರಿಟನ್ ಎಂಬುದೊಂದು ಸ್ಥಾಪನೆಯಾಗಿ (1835) ಇವನನ್ನೇ ಇದರ ನಿರ್ದೇಶಕನನ್ನಾಗಿ ಮಾಡಲಾಯಿತು. ಪ್ರಾಗ್ ಜೀವಿಶಾಸ್ತ್ರಜ್ಞರನ್ನೂ ರಸಾಯನ ವಿe್ಞÁನಿಗಳ ನೆರವನ್ನೂ ಪಡೆದು ತನ್ನ ಮೋಜಣಿ ಕಾರ್ಯವನ್ನು ಡೆ ಲ ಬೆಷ್ ಮುಂದುವರಿಸಿದ. ಲಂಡನ್ನಿನಲ್ಲಿ ಸ್ಥಾಪನೆಗೊಂಡ (1851) ಪ್ರಾಯೋಗಿಕ ಭೂವಿe್ಞÁನದ ವಸ್ತುಸಂಗ್ರಹಾಲಯದ ಹೊಣೆಗಾರಿಕೆಯನ್ನೂ ಸಹ ಈತನಿಗೆ ವಹಿಸಲಾಯಿತು. ಇದರ ಜೊತೆಗೆ ಸ್ಕೂಲ್ ಆಫ್ ಮೈನ್ಸ್, ಮೈನಿಂಗ್ ರೆಕಾರ್ಡ್ ಆಫೀಸ್ ಮುಂತಾದವುಗಳ ಆಡಳಿತ ನಿರ್ವಹಣೆಯನ್ನೂ ಈತ ಹೊತ್ತುಕೊಳ್ಳಬೇಕಾಯಿತು. ಇವನ ಸೇವೆಯನ್ನು ಸರ್ಕಾರ ಮನಗಂಡು ಈತನಿಗೆ ನೈಟ್‍ಹುಡ್ ಗೌರವವನ್ನು ನೀಡಿ (1842) ಪುರಸ್ಕರಿಸಿತು. ಇದಲ್ಲದೆ ಲಂಡನ್ನಿನ ಜಿಯೊಲಾಜಿಕಲ್ ಸೊಸೈಟಿಯ ಅಧ್ಯಕ್ಷನನ್ನಾಗಿಯೂ ಈತನನ್ನು ಆಯ್ಕೆ ಮಾಡಲಾಯಿತು (1847). ಈ ಸೊಸೈಟಿಯ ಉಚ್ಚಗೌರವವಾದ ವೂಲಾಸ್ಟನ ಪದಕವನ್ನೂ ನೀಡಲಾಯಿತು (1855). ಇವನಿಗೆ 1850ರ ಹೊತ್ತಿಗೆ ಒಂದು ಬಗೆಯ ಪಾಶ್ರ್ವವಾಯು ರೋಗ ತಗುಲಿತು. ಸಾಯುವ (13-4-1855) ಎರಡು ದಿನಗಳ ಮುಂಚೆಯೂ ಈತ ತನ್ನ ಕೆಲಸವನ್ನು ನಿರ್ವಹಿಸುತ್ತಿದ್ದ.							(ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ